ಸಾಹಿತ್ಯ
ಅಲ್ಲಮನ ವಚನಗಳು (ಪ್ರಭುದೇವರ ವಚನಗಳು)

೧. ಅಲ್ಲಮನ ವಚನಗಳು

೨. ಅಲ್ಲಮಪ್ರಭು, ಪ್ರಭುದೇವರು, ಅಲ್ಲಮ

೩. ಕ್ರಿ.ಪೂ. ೧೧೫೨, ೧೨ನೆಯ ಶತಮಾನ

೪. ಬಳ್ಳಿಗಾವೆ, ಬನವಾಸಿ, ಕಲ್ಯಾಣ ಮತ್ತು ಶ್ರೀಶೈಲಗಳು ಅಲ್ಲಮನೊಂದಿಗೆ ಸಹಯೋಗವನ್ನು ಪಡೆದಿರುವ ಮುಖ್ಯ ಸ್ಥಳಗಳು.

೫. ವೀರಶೈವ. (ಅಲ್ಲಮನು ಜಾತಿ, ಧರ್ಮಗಳ ಪರಿಕಲ್ಪನೆಯನ್ನೇ ಸಂಪೂರ್ಣವಾಗಿ ನಿರಾಕರಿಸಿದವನು. ಬಸವಣ್ಣವರು ರೂಪಿಸಿದ ಧರ್ಮಕ್ಕೂ ಅವನು ಅಂತರಂಗದ ವಿಮರ್ಶಕ)

೬. ಯಾವ ರಾಜಾಶ್ರಯವೂ ಇಲ್ಲ.

೭. ಪ್ರಭುದೇವ, ಶೂನ್ಯಸಿಂಹಾಸನದ ಅಧ್ಯಕ್ಷನಾಗಿದ್ದವನು

೮. ಕಾವ್ಯ ಮತ್ತು ತತ್ವಶಾಸ್ತ್ರ

೯. ವಚನಗಳು ( ಬಹು ಮಟ್ಟಿಗೆ ಮುಕ್ತಛಂದದ ರೂಪಗಳು)

೧೦. ಹಸ್ತಪ್ರತಿಗಳು: ಓಲೆಗರಿ ಮತ್ತು ಕಾಗದ. ತೋಂಡೀ ಪರಂಪರೆಯ ಪ್ರಸರಣವೂ ಇದೆ.

೧೧. ಮೊದಲ ಪ್ರಕಾಶನ: ೧೯೩೧ (ಪ್ರಭುದೇವರ ವಚನಗಳು), ೭೧೮ ವಚನಗಳಿವೆ.

೧೨. ಪಿ.ಜಿ. ಹಳಕಟ್ಟಿ

೧೩. ಶಿವಾನುಭವ ಗ್ರಂಥಮಾಲೆ, ಬಿಜಾಪುರ

೧೪. ನಂತರದ ಆವೃತ್ತಿಗಳು: ಅ. ಅಲ್ಲಮನ ವಚನಚಂದ್ರಿಕೆ, ಸಂ. ಎಲ್. ಬಸವರಾಜು, ೧೯೬೦, ೧೩೨೧ ವಚನಗಳಿವೆ ಆ. ಅಲ್ಲಮನ ವಚನಗಳು, ಸಂ. ಎಲ್. ಬಸವರಾಜು, ೧೯೬೯, ೫೦೪ ವಚನಗಳಿವೆ, ಗೀತಾ ಬುಕ್ ಹೌಸ್, ಮೈಸೂರು. ಇ. ವ್ಯೋಮಮೂರ್ತಿ ಅಲ್ಲಮಪ್ರಭುದೇವರ ವಚನಗಳು, ಸಂ. ಆರ್.ಸಿ. ಹಿರೇಮಠ ಮತ್ತು ಎಂ.ಎಸ್. ಸುಂಕಾಪುರ, ೧೯೭೬, ೧೪೦೯ ವಚನಗಳಿವೆ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ. ಈ. ಅಲ್ಲಮನ ವಚನಸುಧೆ, ಸಂ. ಕಾವ್ಯಪ್ರೇಮಿ ಮತ್ತು ಚಿದಂಬರ ಇನಾಂದಾರ್, ೧೯೭೯, ಸಮಾಜ ಪುಸ್ತಕಾಲಯ, ಧಾರವಾಡ, ಉ. ಅಲ್ಲಮಪ್ರಭುವಿನ ಟೀಕಿನ ವಚನಗಳು, ಸಂ. ಇಮ್ಮಡಿ ಶಿವಬಸವಸ್ವಾಮಿ, ೧೯೮೬, ಶ್ರೀ ಶಿವರಾತ್ರೀಶ್ವರ ಗ್ರಂಥಮಾಲಾ, ಮೈಸೂರು. (ಇದರಲ್ಲಿ ೭೯೭ ವಚನಗಳಿವೆ. ಸಂಪಾದಕರು ಮೂರು ಓಲೆಗರಿ ಹಸ್ತಪ್ರತಿಗಳು ಮತ್ತು ಎರಡು ಮುದ್ರಿತ ಆವೃತ್ತಿಗಳನ್ನು ಅವಲಂಬಿಸಿದ್ದಾರೆ.

೧೫. ಅಲ್ಲಮಪ್ರಭು ಅಥವಾ ಅವರನ್ನು ನಾಡು ಗೌರವದಿಂದ ಕರೆಯುವಂತೆ ಪ್ರಭುದೇವರು ಕರ್ನಾಟಕದ ಅತ್ಯಂತ ಪ್ರಸಿದ್ಧರಾದ ಕವಿ, ಅನುಭಾವಿ ಮತ್ತು ತತ್ವಶಾಸ್ತ್ರಜ್ಞರಲ್ಲಿ ಒಬ್ಬರು. ಕನ್ನಡ ಭಾಷೆಯನ್ನು ಅತ್ಯಂತ ಸಂಕೀರ್ಣವಾದ ಅನುಭವಗಳು ಮತ್ತು ಆಲೋಚನೆಗಳ ಸಂವಹನಕ್ಕೆ ಸಜ್ಜುಗೊಳಿಸಿಕೊಂಡು ಬಳಸಿದವರಲ್ಲಿ ಅಲ್ಲಮನ ಸ್ಥಾನ ದೊಡ್ಡದು. ಅವನು ಹನ್ನೆರಡನೆಯ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ವೀರಶೈವಧರ್ಮದ ಎಲ್ಲ ಹಿರಿಯರಿಗೆ ಗುರು, ಗೆಳೆಯ ಮತ್ತು ಮಾರ್ಗದರ್ಶಿಯಾಗಿದ್ದವನು. ಸುಮಾರು ಎಂಟು ನೂರರಿಂದ, ಹದಿನಾಲ್ಕು ನೂರರವರೆಗಿನ ಸಂಖ್ಯಾಬಾಹುಳ್ಯವನ್ನು ಹೊಂದಿರುವ ಅವನ ವಚನಗಳು ಅನೇಕ ವಸ್ತುಗಳನ್ನು ಒಳಗೊಂಡಿವೆ. ಅಲ್ಲಮನು ವೀರಶೈವಧರ್ಮಕ್ಕೆ ಹಾಗೂ ಅದರ ಅನೇಕ ನಾಯಕರಿಗೆ ಅಂತರಂಗದೊಳಗಿನ ವಿಮರ್ಶಕನಾಗಿದ್ದನು. ಆದ್ದರಿಂದಲೇ ಅವನ ಎಷ್ಟೋ ವಚನಗಳು, ಪ್ರತಿಕ್ರಿಯೆ, ಸ್ಪಷ್ಟೀಕರಣ ಮತ್ತು ಪ್ರಶ್ನೆಗಳ ರೂಪವನ್ನು ಪಡೆದಿವೆ. ಕೆಲವು ಶತಮಾನಗಳ ನಂತರ ರೂಪಿತವಾದ ಶೂನ್ಯಸಂಪಾದನೆಯು ಅಲ್ಲಮನ ಮತ್ತು ಇತರ ಶಿವಶರಣರ ವಚನಗಳ ಸಂದರ್ಭೀಕರಣಕ್ಕೆ ಪ್ರಯತ್ನಿಸಿದೆ. ಅಲ್ಲಮನು ತನ್ನ ವಚನಗಳಲ್ಲಿ ಗುಹೇಶ್ವರ ಅಥವಾ ಗೊಗ್ಗೇಶ್ವರ ಎಂಬ ಅಂಕಿತವನ್ನು ಬಳಸಿದ್ದಾನೆ. ಅವನ ವಚನಗಳು ವೀರಶೈವದ ತಾತ್ವಿಕ ತಿರುಳನ್ನು ಒಳಗೊಂಡಿವೆ. ಆಚರಣೆಗಳು ಮತ್ತು ವಿಧಿಕ್ರಿಯೆಗಳಿಗೆ ಸಂಬಂಧಿಸಿದ ಸಂಗತಿಗಳಿಗೆ ಅಲ್ಲಿ ಅವಕಾಶವಿಲ್ಲ. ಅವನ ಭಾಷೆಯು ಅಮೂರ್ತವಾದ ಸಂಗತಿಗಳ ಮತ್ತು ಐಂದ್ರಿಯಿಕವಾದ ಪ್ರತಿಮೆಗಳ ಸಂಯೋಜನೆ.

೧೬. ಮುಂದಿನ ಓದು:

ಅ. ಅಲ್ಲಮಪ್ರಭು ಮತ್ತು ಶೈವಪ್ರತಿಭೆ, ಡಿ.ಆರ್. ನಾಗರಾಜ್, ೧೯೯೯, ಅಕ್ಷರ ಪ್ರಕಾಶನ, ಹೆಗ್ಗೋಡು.

ಆ. ಶೂನ್ಯಸಂಪಾದನೆಗಳು- ಸಾಂಸ್ಕೃತಿಕ ಮುಖಾಮುಖಿ, ಸಂ. ಅಮರೇಶ ನುಗಡೋಣಿ, ೨೦೦೨, ಕನ್ನಡ ವಿಶ್ವವಿದ್ಯಾಲಯ, ಹಂಪಿ. (ಈ ಕೃತಿಯ ಗ್ರಂಥಸೂಚಿಯಲ್ಲಿ ಅನೇಕ ಪುಸ್ತಕಗಳು ಮತ್ತು ಲೇಖನಗಳ ಪ್ರಸ್ತಾಪವಿದೆ)

ಇ, ಮಧ್ಯಕಾಲೀನ ಭಕ್ತಿ ಮತ್ತು ಅನುಭಾವ ಸಾಹಿತ್ಯ ಹಾಗೂ ಚಾರಿತ್ರಿಕ ಪ್ರಜ್ಞೆ , ಬಸವರಾಜ ಕಲ್ಗುಡಿ, ೧೯೮೮, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಈ. ವೆಬ್‌ಸೈಟ್‌ನಲ್ಲಿ ಶೂನ್ಯಸಂಪಾದನೆ ಎಂಬ ನಮೂದಿಗೆ ಸಂಬಂಧಿಸಿದಂತೆ ಕೊಟ್ಟಿರುವ ಗ್ರಂಥಗಳು ಮತ್ತು ಲೇಖನಗಳನ್ನೂ ಗಮನಿಸಬಹುದು.

ಮುಖಪುಟ / ಸಾಹಿತ್ಯ